ಒತ್ತಡಕ್ಕೆ ಸಂಬಂಧಿಸಿದಂತೆ, ಹಲವು ಮಾರುತಗಳ ವ್ಯವಸ್ಥೆಯನ್ನು ಗೋಳದಾದ್ಯಂತ ಕಾಣಬಹುದು. ಅವುಗಳು ಕೆಲವೇ ದಿನಗಳಲ್ಲಿ ಕೊನೆಗೊಳ್ಳುತ್ತವೆ, ಮತ್ತು ಕೇವಲ ಅತಿ ಚಿಕ್ಕ ಭೂಪ್ರದೇಶಗಳ ಮೇಲೆ ಪ್ರಭಾವ ಬೀರುತ್ತವೆ. ಒತ್ತಡ ವ್ಯವಸ್ಥೆಯ ಮೇಲೆ ಅಂತಹ ಮಾರುತಗಳು ವಿವಿಧ ದಿಕ್ಕುಗಳಿಂದ ಬೀಸುತ್ತವೆ. ಇವುಗಳ ವೇಗ ಮತ್ತು ದಿಕ್ಕುಗಳೆರಡೂ ವ್ಯತ್ಯಾಸವನ್ನು ಹೊಂದಿರುತ್ತವೆ. ಇವುಗಳನ್ನೇ ಅನಿಶ್ಚಿತ ಮಾರುತಗಳೆಂದು ಕರೆಯುತ್ತೇವೆ. ಅನಿಶ್ಚಿತ ಮಾರುತಗಳನ್ನು ಪ್ರಧಾನವಾಗಿ ಎರಡು ಪ್ರಕಾರಗಳಾಗಿ ವರ್ಗೀಕರಿಸಲಾಗಿದೆ. ಅವುಗಳೆಂದರೆ ಆವರ್ತ ಮಾರುತಗಳು ಮತ್ತು ಪ್ರತ್ಯಾವರ್ತ ಮಾರುತಗಳು. |